Tuesday, January 17, 2017








ಸದ್ಯದಲ್ಲೇ ಪೂರ್ಣ ಮಾಹಿತಿಗಳೊಂದಿಗೆ ನಿಮ್ಮೊಂದಿಗೆ......

Monday, March 11, 2013

ಲಾವಣ್ಯದ 36ನೇ ವಾರ್ಷಿಕೋತ್ಸವ





ಲಾವಣ್ಯದ 36ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ: 24-02-2013ನೇ ಭಾನುವಾರ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯದ ಅಧ್ಯಕ್ಷರಾದ ಬಿ. ರಾಮ ಟೈಲರ್ ಅಧ್ಯಕ್ಷತೆಯಲ್ಲಿ ಜರುಗಿತು. ವಿನೋದ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಜೇಸಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸದಾನಂದ ನಾವಡ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು ಪ್ರಧಾನ ಕಾರ್ಯದರ್ಶಿ ಬಿ. ಕೃಷ್ಣಮೂರ್ತಿ ಕಾರಂತ, ಗೌರವಾಧ್ಯಕ್ಷ ಸದಾಶಿವ ಡಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯದ ಕಲಾವಿದರಿಂದ ರಾಜೇಂದ್ರ ಕಾರಂತರು ರಚಿಸಿ ನಿರ್ದೇಶಿದ 'ಮರಣ ಮೃದಂಗ' ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

ಲಾವಣ್ಯದ ನೂತನ ಕಾರ್ಯಕಾರಿ ಸಮಿತಿ

ಗೌರವಾಧ್ಯಕ್ಷರು    : ಸದಾಶಿವ ಡಿ.
ಅಧ್ಯಕ್ಷರು : ರಾಮ ಟೈಲರ್
ಉಪಾಧ್ಯಕ್ಷರು : ರವೀಂದ್ರ ಶ್ಯಾನುಭಾಗ್, ಕೆ. ನಾರಾಯಣ
ಪ್ರಧಾನ ಕಾರ್ಯದರ್ಶಿ : ಬಿ. ಕೃಷ್ಣಮೂರ್ತಿ ಕಾರಂತ
ಜೊತೆ ಕಾರ್ಯದರ್ಶಿ : ಬಿ ನಾಗರಾಜ ಕಾರಂತ, ವಿಶ್ವನಾಥ ಆಚಾರ್ಯ
ಸಂಘಟನಾ ಕಾರ್ಯದರ್ಶಿ : ಡಿ. ಮೂರ್ತಿ
ಕೋಶಾಧ್ಯಕ್ಷ: ಸುನಿಲ್ ಬೈಂದೂರು
ವ್ಯವಸ್ಥಾಪಕರು: ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ
ಕಾರ್ಯಕಾರಿ ಸಮಿತಿ ಸದಸ್ಯರು:
ಗಿರೀಶ ಬೈಂದೂರು, ಉದಯ ಆಚಾರ್ಯ, ಗಣಪತಿ. ಎಸ್., ನಾಗೇಂದ್ರ ಬಂಕೇಶ್ವರ, ಸತ್ಯಪ್ರಸನ್ನ, ಯೋಗೀಶ ಬಂಕೇಶ್ವರ,
 ಕೆ.ಜಿ. ಭಟ್, ರಾಜಶೇಖರ, ನರಸಿಂಹ ನಾಯಕ್, ಚಂದ್ರ ಬಂಕೇಶ್ವರ, ದಯಾನಂದ, ನಾಗಪ್ಪ ಬಿ.,ಬಾಲಕೃಷ್ಣ, ನಾಗರಾಜ ಗಾಣಿಗ, ದಿನಕರ ಹೋಬಳಿದಾರ, ವಿಶ್ವನಾಥ ಶೆಟ್ಟಿ, ಗೋಪಾಲ ಗಾಣಿಗ.
 
         
                      ಬಿ. ರಾಮ ಟೈಲರ್                       


                                
ಬಿ. ಕೃಷ್ಣಮೂತಿ೵ ಕಾರಂತ

Monday, September 17, 2012

ಕಾಡುತಿಹುದೀ ರಂಗ ತರಂಗ ಪುಸ್ತಕ ಬಿಡುಗಡೆ ಸಮಾರಂಭ

ಬೈಂದೂರಿನ ಹೆಮ್ಮೆಯ ನಟ-ನಿರ್ದೇಶಕ-ಸಂಘಟಕ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ ಪುರಸ್ಕ್ರತ ಲಾವಣ್ಯದ ಶ್ರೀ ಗಣೇಶ ಕಾರಂತರವರ ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಯವರು ಪ್ರಕಟಿಸಿರುವ ಡಾ| ಸುಬ್ರಹ್ಮಣ್ಯ ಭಟ್ ಅವರು ಬರೆದಿರುವ "ಕಾಡುತಿಹುದೀ ರಂಗ ತರಂಗ" ಪುಸ್ತಕ ಬಿಡುಗಡೆ ಸಮಾರಂಭ.






Thursday, May 10, 2012

ಆಲಿಬಾಬಾ ಮತ್ತು 40 ಕಳ್ಳರು ಲಾವಣ್ಯ ಮಕ್ಕಳ ತಂಡದ ನಾಟಕ



ಲಾವಣ್ಯ (ರಿ.) ಬೈಂದೂರು ಇದರ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಮೂಡಿ ಬಂದ ನಾಟಕ ಆಲಿಬಾಬಾ ಮತ್ತು 40 ಕಳ್ಳರು. ರಚನೆ: ಚಂದ್ರಶೇಖರ ಕಂಬಾರ, ಗೌರವ ನಿರ್ದೇಶನ : ಜಿ ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನ : ಗಣೇಶ ಕಾರಂತ್ ಬೈಂದೂರು

Wednesday, August 24, 2011

ಲಾವಣ್ಯದ ಗಣೇಶ ಕಾರಂತರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ











ಶ್ರೀ ಗಣೇಶ ಕಾರಂತ ಬೈಂದೂರು, ಸಂಘಟಕ-ನಟ-ನಿರ್ದೇಶಕ ಲಾವಣ್ಯ(ರ.) ಬೈಂದೂರು ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ದಿನಾಂಕ 20-08-2011ನೇ ಶನಿವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ನಾಟಕ ಅಕಾಡೆಮಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ರಂಗ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ಸಮಾರಂಭದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಬಿ.ವಿ. ರಾಜಾರಾಂ, ಹಿರಿಯ ನುಡಿ ತಜ್ಞರಾದ ಪ್ರೊ ಜಿ. ವೆಂಕಟಸುಬ್ಬಯ್ಯ, ಹಿರಿಯ ಕವಿಗಳು ಚಿಂತಕರಾದ ರಾಷ್ಟ್ರಕವಿ ಡಾ ಜಿ. ಎಸ್. ಶಿವರುದ್ರಪ್ಪ, ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶ್ರೀ ಎಚ್. ಟಿ. ದತ್ತಾತ್ರೇಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತರಾದ ಶ್ರೀ ಮನು ಬಳಿಗಾರ್ ಹಾಗೂ ರಂಗ ಶಂಕರದ ಟ್ರಸ್ಟಿ ಶ್ರೀಮತಿ ಅರುಂಧತಿನಾಗ್ ಉಪಸ್ಥಿತರಿದ್ದರು.

Thursday, April 21, 2011

ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಲಾವಣ್ಯ(ರಿ.) ಬೈಂದೂರಿನ ರಂಗಗೀತೆ ಕಾರ್ಯಕ್ರಮ

ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ 3ನೇ ದಿನವಾದ ಮಾರ್ಚ 13ರಂದು ಸಂಜೆ ಗಂಟೆ 6ರಿಂದ ಏರ್ಪಡಿಸಿದ "ರಂಗಗೀತೆಗಳು" ಕಾರ್ಯಕ್ರಮದಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಭಾಗವಹಿಸಿ ಶ್ರೋತೃಗಳನ್ನು ರಂಜಿಸಲಾಯಿತು. ಸೂಕ್ತ ವೇಷ ಭೂಷಣ ತೊಟ್ಟ ಮೊರ್ತಿ , ಕೃಷ್ಣಮೊರ್ತಿ ಕಾರಂತ್, ಮನೋಹರ್, ಬಿ. ನಾಗರಾಜ ಕಾರಂತ್, ಯೋಗೀಶ್, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ವಿಶ್ವನಾಥ ಆಚಾರ್ಯ ಇವರ ಭಾವಪೂರ್ಣ ಗೀತೆಗಳು ಜನಮೆಚ್ಚುಗೆ ಗಳಿಸಿದವು.
ಹಾರ್ಮೋನಿಯಂನಲ್ಲಿ ಯು. ಶ್ರೀನಿವಾಸ ಪ್ರಭು, ಕೀ ಬೋರ್ಡ್ ನಲ್ಲಿ ಚಂದ್ರ ಬಂಕೇಶ್ವರ, ತಬಲ, ಚಂಡೆ ವಾದನದಲ್ಲಿ ಗೋಪಾಲಕೃಷ್ಣ ಜೋಶಿ, ಮಿಶ್ರವಾದ್ಯದಲ್ಲಿ ಬಿ. ಗಣೇಶ್ ಕಾರಂತ್, ಮಂಜುನಾಥ್ ಶಿರೂರು ಸಹಕರಿಸಿದರು. ಗಣಪತಿ ಎಸ್ ನಿರೂಪಣೆಗೈದರು, ಲಾವಣ್ಯದ ಅಧ್ಯಕ್ಷ ಗಿರೀಶ್ ಬೈಂದೂರು ಉಪಸ್ಥಿತರಿದ್ದರು.